ಏಳಜಿತ್ ರಾಮಕೃಷ್ಣ ಕುಟೀರದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ


ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಏಳಜಿತ್ ರಾಮಕೃಷ್ಣ ಕುಟೀರದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆಯನ್ನು ಪ್ರಾರಂಭಿಸಿದರು. 

ಈ ಕಾರ್ಯಕ್ರಮದಲ್ಲಿ ನಾಯ್ಕನಕಟ್ಟೆ ರಾಮಕೃಷ್ಣ ಮಂದಿರದ ಗಣೇಶ ಪೈ ಹಾಗೂ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಅಧ್ಯಾಪಕರಾದ ಪ್ರಶಾಂತ ಶಾನುಭೋಗ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ಹೇಳಿ ಪುಸ್ತಕಗಳನ್ನು ವಿತರಿಸಿದರು.

ಆಶ್ರಮದ ವತಿಯಿಂದ ಪ್ರತೀ ವರ್ಷವೂ 400 ರಿಂದ 500 ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ಗಳನ್ನು ನೀಡಲಾಗುತ್ತಿದೆ.